ಸಿಲಿಕಾನ್ ಬೀಚ್ ಮುಂದಿನ ಐಟಿ-ಹಬ್ ಯಾಕೆ?
ಇದಕ್ಕೆ ಪುರಾವೆ ನಮ್ಮ ಪರಿಸರ ವ್ಯವಸ್ಥೆಯಲ್ಲಿದೆ!
GCC ಗಳು, ಐಟಿ ಕಂಪನಿಗಳು ಮತ್ತು ಸ್ಟಾರ್ಟಪ್‍ಗಳ ಹೊಸ, ಐಟಿ ಗಮ್ಯಸ್ಥಾನ!
ಐಟಿ ಸಂಪನ್ಮೂಲಗಳಿಂದ ಹಿಡಿದು ಪ್ರತಿಭೆ ಮತ್ತು ಮೂಲಸೌಕರ್ಯಗಳವರೆಗೆ ಒಂದು ಉದಯೋನ್ಮುಖ ಐಟಿ ಕ್ಲಸ್ಟರ್ ಆಗಿ ಮಂಗಳೂರು ಎಲ್ಲವನ್ನೂ ತನ್ನಲ್ಲಿ ಹೊಂದಿದೆ! ವಿಶ್ವ ದರ್ಜೆಯ ಸೇವೆಗಳು/ಉತ್ಪನ್ನಗಳನ್ನು ಉತ್ಪಾದಿಸಲು ಇದನ್ನು ಸದುಪಯೋಗಪಡಿಸಿಕೊಳ್ಳಬಹುದು ಮತ್ತು ಪ್ರಪಂಚದಾದ್ಯಂತದ ಕಂಪನಿಗಳು ಉನ್ನತ ತಂತ್ರಜ್ಞಾನ ಮತ್ತು ಪ್ರತಿಭೆಯ ಜೊತೆ ಭಾರಿ ವೆಚ್ಚ ಕಡಿತದ ಪ್ರಯೋಜನ ಪಡೆದುಕೊಳ್ಳಬಹುದು
ಭಾರತದ ಪ್ರತಿಭೆಗಳ ರಾಜಧಾನಿ
ವಾರ್ಷಿಕವಾಗಿ 10,000 ಇಂಜಿನಿಯರ್‌ಗಳನ್ನು ಹೊರತರುವ 25 ಇಂಜಿನಿಯರಿಂಗ್ ಮತ್ತು 150 ಪದವಿ ಕಾಲೇಜುಗಳೊಂದಿಗೆ ಪ್ರತಿಭೆಗಳ ಬೃಹತ್ ತವರಿಗೆ ಪ್ರವೇಶಿಸಿ.
ಸ್ಥಳೀಯ ವೆಚ್ಚದ ಪ್ರಯೋಜನ
ಮೆಟ್ರೋಗಳಿಗೆ ಹೋಲಿಸಿದಾಗ ಜನರು, ಆಫೀಸು ಮತ್ತು ಮೂಲಸೌಕರ್ಯ ವೆಚ್ಚಗಳು 20-25% ಕಡಿಮೆ, ಜೊತೆಗೆ ಅನುದಾನಗಳು ಮತ್ತು ತೆರಿಗೆ ಪ್ರಯೋಜನಗಳು.
ಕಡಿಮೆ ಉದ್ಯೋಗ
ತೊರೆಯುವಿಕೆ
ವಿಶ್ವ ದರ್ಜೆಯ ಸೌಕರ್ಯಗಳು ಮತ್ತು ಜೀವನಶೈಲಿಯನ್ನು ಹೊಂದಿರುವ ನಗರ, ಅಧಿಕ ಸಂತೋಷದ ಸೂಚ್ಯಂಕ, ಶೂನ್ಯ ಮಾಲಿನ್ಯ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಒಳಗೊಂಡಿದೆ.
ಅತ್ಯಾಧುನಿಕ ಮೂಲಸೌಕರ್ಯ
ವಿಶ್ವ ದರ್ಜೆಯ ಸೌಕರ್ಯಗಳು ಮತ್ತು ಜೀವನಶೈಲಿಯನ್ನು ಹೊಂದಿರುವ ನಗರ, ಅಧಿಕ ಸಂತೋಷದ ಸೂಚ್ಯಂಕ, ಶೂನ್ಯ ಮಾಲಿನ್ಯ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಒಳಗೊಂಡಿದೆ.
ಮಂಗಳೂರು 5 ನಿಮಿಷಗಳ ನಗರ
ಯಾವುದೇ ಟ್ರಾಫಿಕ್ ಜಾಮ್‌ಗಳಿಲ್ಲ, ನಗರದೊಳಗೆ ಎಲ್ಲಿ ಹೋಗಲು ಕೂಡ 5-ನಿಮಿಷದ ಡ್ರೈವ್ ಸಾಕು, ಇದರ ಪರಿಣಾಮವಾಗಿ ಪ್ರಯಾಣಕ್ಕೆ ತಗಲುವ ಸಮಯ ಗಮನಾರ್ಹವಾಗಿ ಕಡಿಮೆಯಾಗುತ್ತದೆ.
ಕಾರ್ಬನ್ ಮತ್ತು ಗ್ರೀನ್ ಕ್ರೆಡಿಟ್ಸ್
ಕಡಿಮೆ ಪ್ರಯಾಣ ಸಮಯ, ಸಾರ್ವಜನಿಕ ಸಾರಿಗೆ, ಕಾರ್ಬನ್-ಸ್ನೇಹಿ ಮೂಲಸೌಕರ್ಯ ಮತ್ತು ಇನ್ನೂ ಹೆಚ್ಚಿನದು!
ಕರಾವಳಿಯ ಬದುಕು ಮತ್ತು ಸಂಸ್ಕೃತಿ!
ಬಿಸಿಲು, ಮರಳು, ಮೋಜು. ಇದುವೇ ನಾವಿರಬೇಕಾದ ಸ್ಥಳ
ನಮ್ಮ "ಸ್ಥಳ" ಮಾರ್ಗದರ್ಶಿಗಳನ್ನು ಡೌನ್‍ಲೋಡ್ ಮಾಡಿ
ಸಿಲಿಕಾನ್ ಬೀಚ್ ತೀರಕ್ಕೆ ಸ್ಥಳಾಂತರಗೊಳ್ಳಲು ಯೋಜಿಸುತ್ತಿದ್ದೀರಾ? ನಿಮ್ಮ ಹೊಸ ನಗರವನ್ನು ನ್ಯಾವಿಗೇಟ್ ಮಾಡಲು ಮತ್ತು ಆನಂದಿಸಲು ಸಹಾಯ ಮಾಡುವುದಕ್ಕಾಗಿ ಇಲ್ಲಿ ಮಾರ್ಗದರ್ಶಿಗಳಿವೆ. ಸ್ಥಳೀಯ ಸೌಕರ್ಯಗಳು, ಸಾರಿಗೆ ಸಲಹೆಗಳು ಮತ್ತು ಗುಪ್ತ ರತ್ನಗಳನ್ನು ಅನ್ವೇಷಿಸಿ. ನಿಮ್ಮ ಸ್ಥಳಾಂತರ ಸುಗಮ ಮತ್ತು ರೋಚಕವಾಗಿರಲಿ!

ಮಂಗಳೂರಿಗಾಗಿ 2024 ಸ್ಥಳ ಮಾರ್ಗದರ್ಶಿ ಡೌನ್‍ಲೋಡ್ ಮಾಡಿ

ಉಡುಪಿ & ಮಣಿಪಾಲಕ್ಕಾಗಿ 2024 ಸ್ಥಳ ಮಾರ್ಗದರ್ಶಿ ಡೌನ್‍ಲೋಡ್ ಮಾಡಿ
ಸಿಲಿಕಾನ್ ಬೀಚ್ ಪ್ರೋಗ್ರಾಂ
ಸಿಲಿಕಾನ್ ಬೀಚ್ ಪ್ರೋಗ್ರಾಂ ಕರ್ನಾಟಕ ಕರಾವಳಿಯನ್ನು ವಿಶೇಷವಾಗಿ ಮಂಗಳೂರನ್ನು ಅಭಿವೃದ್ಧಿಪಡಿಸಲು ಮೂರು ಪ್ರಮುಖ ಅಂಶಗಳ ಮೇಲೆ ಕೇಂದ್ರೀಕರಿಸುವ ಗುರಿಯನ್ನು ಹೊಂದಿದೆ: ಭವಿಷ್ಯ, ಪ್ರಕೃತಿ ಮತ್ತು ಸಂಸ್ಕೃತಿ.
ಇದು ಸ್ಥಳೀಯ ಐಟಿ ಸಂಪನ್ಮೂಲಗಳು, ಪ್ರತಿಭೆ ಮತ್ತು ಮೂಲಸೌಕರ್ಯಗಳನ್ನು ವರ್ಧಿಸುವ ಮೂಲಕ ಈ ಪ್ರದೇಶವನ್ನು ಶಿಕ್ಷಣ ಕಾಶಿಯಿಂದ ತಂತ್ರಜ್ಞಾನದ ಕೇಂದ್ರವಾಗಿ ಪರಿವರ್ತಿಸುವ ಗುರಿಯನ್ನು ಹೊಂದಿದೆ. ಆ ಮೂಲಕ ವಿಶ್ವ ದರ್ಜೆಯ ಸೇವೆಗಳು ಮತ್ತು ಉತ್ಪನ್ನಗಳನ್ನು ಉನ್ನತ ತಂತ್ರಜ್ಞಾನ ಮತ್ತು ಪ್ರತಿಭೆಯೊಂದಿಗೆ ಒದಗಿಸಿ, ಆ ಪರಿಣಾಮವಾಗಿ ವಿಶ್ವದಾದ್ಯಂತ ಕಂಪನಿಗಳಿಗೆ ಗಮನಾರ್ಹ ವೆಚ್ಚ ಕಡಿತದ ಪ್ರಯೋಜನಗಳನ್ನು ದೊರಕಿಸುವ ಗುರಿಯನ್ನು ಹೊಂದಿದೆ.ಈ ಮೂಲಕ ಸ್ಥಳೀಯ ಆರ್ಥಿಕತೆ ಮತ್ತು ಸಾಮಾಜಿಕ ಅಭಿವೃದ್ಧಿಗೆ ದಾರಿಯು ತೋರುತ್ತದೆ.
ಸಿಲಿಕಾನ್ ಬೀಚ್ ಪ್ರೋಗ್ರಾಂ ಮಂಗಳೂರನ್ನು ಗ್ಲೋಬಲ್ ಐಟಿ ಮ್ಯಾಪ್‌ನಲ್ಲಿ ಪ್ರಮುಖ ಸ್ಥಾನಕ್ಕೆ ತರುವ ಗುರಿಯನ್ನು ಹೊಂದಿದೆ.
ಮಂಗಳೂರು ಮತ್ತು ಅದರಾಚೆಗೆ ಸ್ಥಳೀಯ ಪರಿಸರ ವ್ಯವಸ್ಥೆಗೆ ಉತ್ತೇಜನ ನೀಡಲು 10 ವರ್ಷಗಳ ಐಟಿ ದೂರದೃಷ್ಟಿ
ತಂತ್ರಜ್ಞಾನ-ಸಂಬಂಧಿ ಉದ್ಯೋಗಗಳಲ್ಲಿ 10x ಹೆಚ್ಚಳ (20,000 ರಿಂದ 200,000)
ಸ್ಟಾರ್ಟ್‌ಅಪ್‌ಗಳ ಸಂಖ್ಯೆಯಲ್ಲಿ 20x ಹೆಚ್ಚಳ (200 ರಿಂದ 4,000)
ಪ್ರಾದೇಶಿಕ GDP ಯಲ್ಲಿ 5x ಹೆಚ್ಚಳ ($20 ಶತಕೋಟಿಯಿಂದ $100 ಶತಕೋಟಿಗೆ)
ಕಾರ್ಬನ್-ತಟಸ್ಥ ಹಸಿರು ಸ್ಥಳಗಳಾಗಿ ನಮ್ಮ ಐಟಿ ಕಟ್ಟಡಗಳಲ್ಲಿ 95%
Our Patron Members
ಇತ್ತೀಚಿನ ಸುದ್ದಿ ಮತ್ತು ಈವೆಂಟ್‍ಗಳನ್ನು ನೋಡಿ
ಇತ್ತೀಚಿನ ಸುದ್ದಿ ಮತ್ತು ಬೆಳವಣಿಗೆಗಳನ್ನು ಹಂಚಿಕೊಳ್ಳುವ ಮೂಲಕ ಮತ್ತು ಈ ಪ್ರದೇಶವನ್ನು ಶಿಕ್ಷಣ ಕಾಶಿಯಿಂದ ತಂತ್ರಜ್ಞಾನದ ಕೇಂದ್ರವಾಗಿ ಪರಿವರ್ತಿಸುವ ಕುರಿತು ತಮ್ಮ ಒಳನೋಟಗಳನ್ನು ಒದಗಿಸಲು ವಿವಿಧ ಹಿನ್ನೆಲೆಯ ಉದ್ಯಮ ನಾಯಕರನ್ನು ಆಹ್ವಾನಿಸುವ ಮೂಲಕ ಈ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ನಾವು ಉದ್ದೇಶಿಸಿದ್ದೇವೆ.

ನಮ್ಮೊಂದಿಗೆ ಸೇರಿಕೊಳ್ಳಿ ಮತ್ತು ನಾವು ಈ ಪ್ರದೇಶವನ್ನು ಜೊತೆಯಾಗಿ ಬದಲಿಸೋಣ!
ಭವಿಷ್ಯವನ್ನು ರೂಪಿಸಲು, ಅವಕಾಶಗಳನ್ನು ಸೃಷ್ಟಿಸಲು ಮತ್ತು ಪರಂಪರೆಗಳನ್ನು ನಿರ್ಮಿಸಲು ನಾವು ವಿಶ್ವದೆಲ್ಲೆಡೆ ಹರಡಿರುವ ನಮ್ಮವರನ್ನು ಮತ್ತು ಉದ್ಯಮ ನಾಯಕರನ್ನು ಆಹ್ವಾನಿಸುತ್ತಿದ್ದೇವೆ. ಸಿಲಿಕಾನ್ ಬೀಚ್‌ನಲ್ಲಿ ನಿಮ್ಮ ಕಾರ್ಯಾಚರಣೆಯನ್ನು ಪ್ರಾರಂಭಿಸಿ ಮತ್ತು ಅನ್ನು ರಚಿಸಿ. #BestofOpportunities.
ನಾವು ನಮ್ಮ ಪ್ರದೇಶವನ್ನು ಪರಿವರ್ತಿಸುವಾಗ ಬೇಗನೆ ನಮ್ಮೊಂದಿಗೆ ಸೇರಿ.
ದಿ ಸಿಲಿಕಾನ್ ಬೀಚ್ ಪ್ರೋಗ್ರಾಂನಿಂದ ಇನ್ನಷ್ಟು

ಮೂವ್-ಇನ್ ಮಾರ್ಗದರ್ಶಿ
ಮಂಗಳೂರಿಗಾಗಿ 2024 ಸ್ಥಳ ಮಾರ್ಗದರ್ಶಿ ಡೌನ್‍ಲೋಡ್ ಮಾಡಿ
Dec 14, 2024

ಮೂವ್-ಇನ್ ಮಾರ್ಗದರ್ಶಿ
ಉಡುಪಿ & ಮಣಿಪಾಲಕ್ಕಾಗಿ 2024 ಸ್ಥಳ ಮಾರ್ಗದರ್ಶಿ ಡೌನ್‍ಲೋಡ್ ಮಾಡಿ
Dec 14, 2024